ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕು, ಅನುಗೊಂಡನಹಳ್ಳಿ ಹೋಬಳಿ, ದೇವನಗೊಂದಿ ಪಂಚಾಯ್ತಿ, ಮೇಡಹಳ್ಳಿ ಗ್ರಾಮದಲ್ಲಿ ನೆಲೆಸಿರುವ ಶ್ರೀ ಪ್ರಸನ್ನ ವೀರಾಂಜನೇಯಸ್ವಾಮಿ, ಶ್ರೀ ಮಹಾಗಣಪತಿ, ಶ್ರೀ ಮಹಾಲಕ್ಷ್ಮೀ ದೇವರುಗಳ, ನೂತನ ವಿಮಾನಗೋಪುರ ಹಾಗೂ ನವಗ್ರಹ ಜೀರ್ಣೋದ್ಧಾರ ಅಷ್ಟಬಂಧನ, ಸಂಪ್ರೋಕ್ಷಣ, ಕುಂಬಾಭಿಷೇಕ ಕಾರ್ಯಕ್ರಮವು ಇದೇ ಸ್ವಸ್ತಿಶ್ರೀ ಶ್ರೀ ಶೋಭಕೃತ ನಾಮ ಸಂವತ್ಸರ ಉತ್ತರಾಯಣೆ ಜೇಷ್ಠ ಮಾಸ ಕೃಷ್ಣ ಪಕ್ಷ ದಶಮಿ ಮಂಗಳವಾರ ದಿನಾಂಕ : 13-06-2023 ರಿಂದ ದ್ವಾದಶಿ ದಿನಾಂಕ : 15-06-2023 ನೇ ಬಾಲದವರೆಗೆ ತಯಾತ್ಮಿಕ ಸಂಕಲ್ಪ ರೀತ್ಯಾ ಶ್ರೀ ವೈಖಾನಸ ಆಕಮೋಕ ಪ್ರಕಾರವಾಗಿ ನಡೆಸಲು ಭಗವತ್ ಪ್ರೇರಣೆಯಾಗಿರುತ್ತದೆ. ಮಾನ್ಯ ಭಕ್ತ ಮಹಾಶಯರೆಲ್ಲರೂ ಸಕಾಲಕ್ಕೆ ಕುಟುಂಬ ಪರಿವಾರ ಸಮೇತರಾಗಿ ಆಗಮಿಸಿ ಪೂಜಾ ಕೈಂಕರ್ಯಗಳಲ್ಲಿ ಭಾಗವಹಿಸಿ ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ ಶ್ರೀ ಪ್ರಸನ್ನ ವೀರಾಂಜನೇಯಸ್ವಾಮಿ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ಕೋರುತ್ತೇವೆ.